ಒಂದೊಂದು ನದಿಗೂ ಒಂದೊಂದು ಕತೆ – ನೇತ್ರಾವತಿ

 

 

ಸ್ವಯಂಭೂ

ಒಮ್ಮೆ ನಾರದನು ಭೂಲೋಕದಲ್ಲಿ ಸಂಚರಿಸುತ್ತಿದ್ದ. ಹೆಚ್ಚಿನ ಜನರು ಮೋಸ ವಂಚನೆಗಳಲ್ಲೇ ನಿರತರಾಗಿದ್ದರು. ತಂದೆ-ತಾಯಿಗಳನ್ನು ಕೊಲ್ಲುವ ಕ್ರೂರ ಮಕ್ಕಳು. ಪರಸ್ಪರ ಸಾಮರಸ್ಯದಿಂದ ಬಾಳಲಾರದ ಗಂಡ ಹೆಂಡಿರು. ವಿದ್ಯಾರ್ಥಿಗಳನ್ನು ಚೆನ್ನಾಗಿ ರೂಪಿಸದ ಶಿಕ್ಷಕರು. ರೋಗಿಗಳ ರಕ್ತ ಹೀರುವ ವೈದ್ಯರು. ಹೆಣ್ಣು , ಹೊನ್ನು , ಮಣ್ಣುಗಳಲ್ಲೇ ಅತ್ಯಾಶೆಯನ್ನು ಹೊಂದಿರುವ ಯತಿಗಳು. ಪ್ರಜೆಗಳ ಸಂಪತ್ತುಗಳನ್ನು ಸೂರೆಮಾಡಿ ಐಷಾರಾಮಿ ಜೀವನವನ್ನು ನಡೆಸುವ ಪ್ರಭುತ್ವ. ಧರ್ಮದ ಮುಖವಾಡವನ್ನು ಧರಿಸಿ ಅಧರ್ಮವನ್ನೇ ಆಚರಿಸುತ್ತಿರುವ ಆಷಾಡಭೂತಿಗಳು… ಎಲ್ಲಿ ನೋಡಿದರೂ ಮೋಸ, ವಂಚನೆ, ಕ್ರೌರ್ಯ, ಕೊಲೆ, ಸುಲಿಗೆ, ದೂÂತ, ಮದ್ಯವ್ಯಸನ, ಹೆಣ್ಣಿನಾಸೆ, ಭ್ರಷ್ಟಾಚಾರಗಳೇ ನಾರದನ ಕಣ್ಣಿಗೆ ಬಿತ್ತು.
ಇದನ್ನೆಲ್ಲಾ ಕಂಡ ನಾರದರಿಗೆ ತುಂಬಾ ದುಃಖವಾಯಿತು. ನಾರಾಯಣನೇಕೆ ತನ್ನ ಪಾಲನೆಯ ಕೆಲಸವನ್ನು ಚೆನ್ನಾಗಿ ನಿರ್ವಹಿಸುತ್ತಿಲ್ಲ? ಪ್ರಳಯ ಕಾಲವು ಹತ್ತಿರ ಬಂತೇ? ಎಂದೆಲ್ಲಾ ಯೋಚಿಸಿದ ನಾರದ ಭೂಮಿಯ ದುರವಸ್ಥೆಯನ್ನು ಶಿವನಿಗೆ ತಿಳಿಸೋಣವೆಂದು ನೇರ ಕೈಲಾಸಕ್ಕೆ ಬಂದನು.

ಮನೆಗೆ ಅತಿಥಿಯಾಗಿ ಬಂದ ನಾರದನನ್ನು ಕಂಡು ಶಿವನು ಬಹಳ ಸಂತೋಷದಿಂದ ಮತ್ತು ಆದರದಿಂದ ಸತ್ಕರಿಸಿದನು. ಆದರೆ ನಾರದನ ಮುಖವೇಕೋ ಪ್ರಸನ್ನವಾಗಿರಲಿಲ್ಲ. ಈಶ್ವರನಿಗೆ ಆಶ್ಚರ್ಯವಾಯಿತು. ಲವಲವಿಕೆಯಿಲ್ಲದ ನಾರದನನ್ನು ಕುರಿತು ಪರಮೇಶ್ವರನು ಕೇಳಿಯೇ ಬಿಟ್ಟನು. “”ನಿನ್ನ ಮುಖವೇಕೆ ಬಾಡಿದೆ?’

ನಾರದನು ಬಹಳ ವಿಷಾದದಿಂದ ನೈತಿಕಮೌಲ್ಯ ಕುಸಿದ ಭೂಮಿಯ ಮಾನವರ ದುಃಸ್ಥಿತಿಯನ್ನು ವಿವರಿಸಿದನು. ಶಿವನಿಗೆ ಆಶ್ಚರ್ಯವಾಯಿತು. ಜತೆಗೆ ವಿಷಾದವಾಯಿತು. ಆದರೂ ನಾರದನನ್ನು ಸಮಾಧಾನ ಮಾಡಿ ಕಳುಹಿದ ಶಿವನು ಭೂಲೋಕದ ಸಮಸ್ಯೆಗೆ ಏನಾದರೊಂದು ಪರಿಹಾರವನ್ನು ಕಂಡುಹುಡುಕಲೇಬೇಕು ಎಂದು ಸಂಕಲ್ಪಿಸಿದನು.

ಜೀವಿಗಳು ಬೆಳೆಯುವಷ್ಟು ಬೆಳೆದ ಬಳಿಕ ಆಗುವುದು ನಾಶ. ಜೀವವಿಕಾಸದಲ್ಲಿ ಕೊನೆಯ ಪ್ರಾಣಿ ಮನುಷ್ಯ. ಹಾಗಾದರೆ ಆ ಪ್ರಪಂಚದ ನಾಶಕ್ಕಾಗಿಯೇ ಮನುಷ್ಯನ ಸೃಷ್ಟಿಯಾಯಿತೇ? ಆತನಿಗೆ ಬುದ್ಧಿಯಿದೆ, ವಿವೇಕವಿದೆ, ಪ್ರಜ್ಞೆಯಿದೆ. ಆದರೂ ಆತನು ಹುಂಬನಂತೆ ಏಕೆ ವರ್ತಿಸುತ್ತಾನೆ. ಭೂಮಿಯ ಮಣ್ಣು , ಮರ, ಜೀವಜಾಲದ ರಕ್ಷಣೆಗಾಗಿಯೇ ಮುನಿಗಳು ಧರ್ಮವನ್ನು ರೂಪಿಸಿದನು. ಧರ್ಮವೆಂದರೆ ಮತ, ಪಂಥ, ಪೂಜೆ, ವ್ರತ, ಉಪವಾಸ ಮುಂತಾದ ಆಚರಣೆಗಳಲ್ಲ. ಅದು ಎಲ್ಲರೂ ಜಗತ್ತಿನ ಜಡ-ಚೇತನಗಳ ಜತೆ ಸುಖದಿಂದ ಬಾಳುವ ವಿಧಾನ. ತಾನು ಬಾಳುತ್ತಾ ತನ್ನೊಂದಿಗೆ ಇರುವವರನ್ನೂ , ಇರುವುದನ್ನೂ ಚೆನ್ನಾಗಿ ಇರಿಸಿಕೊಳ್ಳುವ ರೀತಿ. ಪರಸ್ಪರ ಪ್ರೀತಿಯನ್ನು ಕೊಡದೆ ಆಚರಿಸುವ ಧರ್ಮ ಕೇವಲ ಧರ್ಮದ ವಿಡಂಬನೆ.
ಆದುದರಿಂದ ಜೀವನ ಮೌಲ್ಯಗಳೇ ಧರ್ಮ. ಅದು ಬದುಕಿನ ಎಲ್ಲಾ ರಂಗಗಳಲ್ಲೂ ಬೇಕು. ಅದರ ಮರೆವೆಯೇ ನೈತಿಕ ಕುಸಿತಕ್ಕೆ ಕಾರಣ. ಆದುದರಿಂದಲೇ ಇಡೀ ದಿನ ದೇವರ ಮುಂದೆ ಕುಳಿತಿರುವವನು ಧರ್ಮಿಷ್ಟನಾಗಲು ಸಾಧ್ಯವಾದುದು. ನಾಸ್ತಿಕನೂ ಧರ್ಮಿಷ್ಟನಾಗಿರಲು ಸಾಧ್ಯವಾಗಿರುವುದು!
ಹೀಗೆಲ್ಲಾ ಯೋಚಿಸಿದ ಶಿವ ಧರ್ಮರಕ್ಷಣೆಗಾಗಿ ಧರ್ಮದೇವತೆಗಳನ್ನು ಭೂಮಿಗೆ ಕಳುಹಿದನು.

ಆನಂದದಿಂದ ಆತನ ಕಣ್ಣುಗಳಿಂದ ನೀರು ಇಳಿಯಿತು. ಆ ಆನಂದಭಾಷ್ಪವೇ ಕನ್ಯೆಯ ರೂಪತಾಳಿತು.
ಶಿವನು ಆಕೆಗೆ ನೇತ್ರಾವತಿ ಎಂದು ಹೆಸರನ್ನಿರಿಸಿದನು. ಹರಿಯುವ ನದಿಯಂತೆ ಬಾಳು ಇರಬೇಕು ಎಂಬುವುದನ್ನು ಮನುಷ್ಯರಿಗೆ ತಿಳುಹಲು ಆಕೆ ಭೂಲೋಕಕ್ಕೆ ಹೋಗಿ ನದಿಯಾಗಿ ಪ್ರವಹಿಸುವಂತೆ ಆಜ್ಞಾಪಿಸಿದನು. ಶಿವನ ಆಜ್ಞೆಯನ್ನು ಪಡೆದ ನೇತ್ರಾವತಿ ಭೂಮಿಗೆ ಇಳಿದಳು. ಸಹ್ಯ ಪರ್ವತವನ್ನು ಏರಿದಳು. ಅಲ್ಲಿಂದ ಸೆಲೆಯಾಗಿ ಚಿಮ್ಮಿ ನದಿಯಾಗಿ ಹರಿದಳು.

 

(ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾದದ್ದು)

Advertisements
  1. Leave a comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: