ಗುಡುಗುಡಿಯ ಸೇದಿನೋಡೋ

ಗುಡುಗುಡಿಯ ಸೇದಿನೋಡೋ
ಒಡಲೊಳಗಿನಾ ರೋಗ ತೆಗೆದು ಈಡಾಡೋ  ||ಪ||

ಮನಸೆಂಬ ಸಂಚಿಯ ಬಿಚ್ಚಿ ದಿನ
ದಿನವು ಭ್ರಾಂತಿಯೆಂಬ ಭಂಗಿಯ ಕೊಚ್ಚಿ
ನೆನಹೆಂಬ ಚಿಲುಮೆಗೆ ಹಚ್ಚಿ ಬುದ್ದಿ
ಎನುವಂಥ ಕೆಂಡವ ಮೇಲೆ ನೀ ಮುಚ್ಚಿ        ||೧||

ಬುರುಡಿಯೆಂಬೋದು ಶರೀರ – ಇದ
ಅರಿತು ಸುಕೃತದಾಕೊಳವಿಯಾಕಾರ
ವರ ಶಿಶುನಾಳನೆಂಬ ನೀರ – ತುಂಬಿ
ಆರುವೆಂಬ ಆರುವಿಯ ಹೊಚ್ಚೋ ಮೋಜುಗಾರ  ||೨||

ಶುದ್ಧಜ್ಞಾನ ಮೇಲೇರುವುದು
ದಾರಿದ್ರ್ಯ ದೇಹವು ಸುಟ್ಟುಹೋಗಿ ಹಾರುವದು
ಬುದ್ಧಿವಂತರಿಗೆ ತಿಳಿಯುವುದು ನಮ್ಮಾ
ಮುದ್ದು ಶಿಶುನಾಳಧೀಶನ ತೋರುವುದು  ||೩||

Advertisements
  1. Leave a comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: