Archive for category ಕಥಾ ಸಂಗ್ರಹ

ಆರೋಗ್ಯವೇ ಭಾಗ್ಯ

  ಮುತ್ತಯ್ಯ ಶೆಟ್ಟಿ ಎನ್ನುವ ಚಕ್ಕುಲಿ ವ್ಯಾಪಾರಿ ಯಿದ್ದ. ಅವನು ಬುಟ್ಟಿ ತುಂಬ ಚಕ್ಕುಲಿ ತಯಾರಿಸಿ ತಲೆಯಲ್ಲಿ ಹೊತ್ತು ಊರೂರು ತಿರುಗುತ್ತಿದ್ದ. ರುಚಿಕರವಾದ ಚಕ್ಕುಲಿಗಳು ಬಲು ಬೇಗನೆ ಮಾರಾಟವಾಗುತ್ತಿದ್ದವು. ಪರಿಶ್ರಮಕ್ಕೆ ತಕ್ಕ ಲಾಭ ಮಾತ್ರ ಸಿಗುತ್ತಿತ್ತು. ಶೆಟ್ಟಿ ಸುಖದಿಂದ ಕಾಲಯಾಪನೆ ಮಾಡುತ್ತಿದ್ದ. ಆದರೆ ಅವನ ಹೆಂಡತಿ ಸದಾ ಗುನುಗುತ್ತಿದ್ದಳು. “ಇಷ್ಟು ಸಣ್ಣ ಲಾಭ ಸಿಕ್ಕಿದರೆ ನಾವು ಉದ್ಧಾರವಾಗುವುದು ಯಾವಾಗ? ನೀವು ರಾಶಿ ರಾಶಿ ಹಣ ಸಂಪಾದಿಸುವ ದಾರಿ ಹುಡುಕಿ. ಇಲ್ಲವಾದರೆ ನಾನು ತವರಿಗೆ ಹೋಗುತ್ತೇನೆ’ ಎಂದು ಪೀಡಿಸುತ್ತಿದ್ದಳು. […]

Leave a comment

ಒಂದೊಂದು ನದಿಗೂ ಒಂದೊಂದು ಕತೆ – ನೇತ್ರಾವತಿ

    ಸ್ವಯಂಭೂ ಒಮ್ಮೆ ನಾರದನು ಭೂಲೋಕದಲ್ಲಿ ಸಂಚರಿಸುತ್ತಿದ್ದ. ಹೆಚ್ಚಿನ ಜನರು ಮೋಸ ವಂಚನೆಗಳಲ್ಲೇ ನಿರತರಾಗಿದ್ದರು. ತಂದೆ-ತಾಯಿಗಳನ್ನು ಕೊಲ್ಲುವ ಕ್ರೂರ ಮಕ್ಕಳು. ಪರಸ್ಪರ ಸಾಮರಸ್ಯದಿಂದ ಬಾಳಲಾರದ ಗಂಡ ಹೆಂಡಿರು. ವಿದ್ಯಾರ್ಥಿಗಳನ್ನು ಚೆನ್ನಾಗಿ ರೂಪಿಸದ ಶಿಕ್ಷಕರು. ರೋಗಿಗಳ ರಕ್ತ ಹೀರುವ ವೈದ್ಯರು. ಹೆಣ್ಣು , ಹೊನ್ನು , ಮಣ್ಣುಗಳಲ್ಲೇ ಅತ್ಯಾಶೆಯನ್ನು ಹೊಂದಿರುವ ಯತಿಗಳು. ಪ್ರಜೆಗಳ ಸಂಪತ್ತುಗಳನ್ನು ಸೂರೆಮಾಡಿ ಐಷಾರಾಮಿ ಜೀವನವನ್ನು ನಡೆಸುವ ಪ್ರಭುತ್ವ. ಧರ್ಮದ ಮುಖವಾಡವನ್ನು ಧರಿಸಿ ಅಧರ್ಮವನ್ನೇ ಆಚರಿಸುತ್ತಿರುವ ಆಷಾಡಭೂತಿಗಳು… ಎಲ್ಲಿ ನೋಡಿದರೂ ಮೋಸ, ವಂಚನೆ, ಕ್ರೌರ್ಯ, […]

Leave a comment