Archive for category ಸಂತ ಶಿಶುನಾಳ ಶರೀಫರ ಪದಗಳು

ಗುಡುಗುಡಿಯ ಸೇದಿನೋಡೋ

ಗುಡುಗುಡಿಯ ಸೇದಿನೋಡೋ ಒಡಲೊಳಗಿನಾ ರೋಗ ತೆಗೆದು ಈಡಾಡೋ  ||ಪ|| ಮನಸೆಂಬ ಸಂಚಿಯ ಬಿಚ್ಚಿ ದಿನ ದಿನವು ಭ್ರಾಂತಿಯೆಂಬ ಭಂಗಿಯ ಕೊಚ್ಚಿ ನೆನಹೆಂಬ ಚಿಲುಮೆಗೆ ಹಚ್ಚಿ ಬುದ್ದಿ ಎನುವಂಥ ಕೆಂಡವ ಮೇಲೆ ನೀ ಮುಚ್ಚಿ        ||೧|| ಬುರುಡಿಯೆಂಬೋದು ಶರೀರ – ಇದ ಅರಿತು ಸುಕೃತದಾಕೊಳವಿಯಾಕಾರ ವರ ಶಿಶುನಾಳನೆಂಬ ನೀರ – ತುಂಬಿ ಆರುವೆಂಬ ಆರುವಿಯ ಹೊಚ್ಚೋ ಮೋಜುಗಾರ  ||೨|| ಶುದ್ಧಜ್ಞಾನ ಮೇಲೇರುವುದು ದಾರಿದ್ರ್ಯ ದೇಹವು ಸುಟ್ಟುಹೋಗಿ ಹಾರುವದು ಬುದ್ಧಿವಂತರಿಗೆ ತಿಳಿಯುವುದು ನಮ್ಮಾ ಮುದ್ದು ಶಿಶುನಾಳಧೀಶನ ತೋರುವುದು  ||೩|| Advertisements

Leave a comment

ಕೊಡಗನ ಕೋಳಿ ನುಂಗಿತ್ತ

ಕೊಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ ಕೊಡಗನ ಕೋಳಿ ನುಂಗಿತ್ತ        ||ಪ|| ಆಡು ಆನೆಯ ನುಂಗಿ ಗ್ವಾಡೆ ಸುಣ್ಣವ ನುಂಗಿ ಆಡಲು ಬಂದ ಪಾತರದವಳ ಮದ್ದಳೆ ನುಂಗಿತ್ತ ವಳ್ಳು ವನಕಿಯ ನುಂಗಿ ಕಲ್ಲು ಗೂಟವ ನುಂಗಿ ಮೆಲ್ಲಲು ಬಂದ ಮುದುಕಿಯನ್ನು ನೆಲ್ಲು ನುಂಗಿತ್ತ ಹಗ್ಗ ಮಗ್ಗವ ನುಂಗಿ ಮಗ್ಗವ ಲಾಳಿ ನುಂಗಿ ಮಗ್ಗದ ಮ್ಯಾಲೆ ಕುಂತಿರುವಣ್ಣನ ಮಣಿಯು ನುಂಗಿತ್ತ ಎತ್ತು ಜತ್ತಗಿ ನುಂಗಿ ಬತ್ತ ಬಾನವ ನುಂಗಿ ಮುಕ್ಕುಟ ತಿರುಗಿಸುವಣ್ಣನನ್ನು ಮೇಳಿ ನುಂಗಿತ್ತ ಗುಡ್ಡ ಗಹ್ವರ ನುಂಗಿ […]

Leave a comment